ಮಾದುಕೋಡಿ: ಅಭೂತಪೂರ್ವವಾಗಿ ಸಂಪನ್ನಗೊಂಡ ವಾರ್ಷಿಕ ಸಂಭ್ರಮ, ಕೊರಗಜ್ಜನ ಗಗ್ಗರ ಸೇವೆ


ಬಂಟ್ವಾಳ: ಅಮ್ಮುಂಜೆ ಗ್ರಾಮದ ಮಾದುಕೋಡಿ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ವರ್ಷಾವಧಿ ಸಂಭ್ರಮ ಹಾಗೂ ಕೊರಗಜ್ಜನ ಗಗ್ಗರ ಸೇವೆಯು ಶನಿವಾರ ಅಭೂತಪೂರ್ವವಾಗಿ ಸಂಪನ್ನಗೊಂಡಿತು.

ಹಿರಿಯರಾದ ಸುಂದರ ಬೆಳ್ಚಡ ಮತ್ತು ಗುರೂಜಿ ವಿಜಯ ಸುವರ್ಣ ಪೊಳಲಿ ಮಾರ್ಗದರ್ಶನದಲ್ಲಿ ನಡೆದ
ಗಣಹೋಮ, ಭಜನಾ ಸಂಕೀರ್ತನ, ಮಹಾಪೂಜೆ ಮೊದಲಾದ ವೈಧಿಕ, ಧಾರ್ಮಿಕ ಕಾರ್ಯಕ್ರಮಗಳು ಸಹಸ್ರಾರು ಭಕ್ತರ ಸಮಕ್ಷಮದಲ್ಲಿ ಭಕ್ತಿ ಶ್ರದ್ಧಾಪೂರ್ವಕವಾಗಿ ನಡೆಯಿತು.

ಪ್ರಸಿದ್ಧ ಕಲಾವಿದರಿಂದ ನಡೆದ ಸಂಗೀತ ಗಾನ, ಭೋಜರಾಜ್ ವಾಮಂಜೂರು ಮತ್ತು ಅರವಿಂದ್ ಬೋಳಾರ್ ವಿಶೇಷ ಪಾತ್ರದೊಂದಿಗೆ ಮೂಡಿಬಂದ ಯಕ್ಷ-ಗಾನ-ನಾಟ್ಯ-ಹಾಸ್ಯ-ವೈಭವ ಕಲಾಭಿಮಾನಿಗಳ ಮನಸೂರೆಗೊಂಡಿತು.
” ತುಳುವ ಮಣ್ಣ್ ಡ್ ಸ್ವಾಮಿ ಕೊರಗಜ್ಜೆ” ಎಂಬ ವಿಷಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್ ಸಾರ್ ನಿರರ್ಗಳವಾಗಿ ನೀಡಿದ ವಿಶೇಷ ಉಪನ್ಯಾಸವು ಜನರಲ್ಲಿ ತುಳುನಾಡಿನ ಆಚಾರ ವಿಚಾರ,ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವಲ್ಲಿ ವಿಶೇಷ ಪ್ರೇರಣೆ ನೀಡಿತು.


ಇಡೀ ದಿನ ಸಹಸ್ರಾರು ಮಂದಿಗೆ ನಡೆದ ಊಟೋಪಚಾರ, ಅಕರ್ಷಣೀಯ ವಿದ್ಯುದ್ಧೀಪಾಲಂಕಾರ, ಕೊರಗಜ್ಜನ ಸಾನಿಧ್ಯದ ವಿಶೇಷ ಹೂವಿನ ಆಲಂಕಾರ,


ಕೊರಗಜ್ಜನ ಗಗ್ಗರ ಸೇವೆ, ಅಪಾರ ಸಂಖ್ಯೆಯಲ್ಲಿ ಭಕ್ತರ ಪಾಲ್ಗೊಳ್ಳುವಿಕೆ, ಅಚ್ಚುಕಟ್ಟಾದ ಶಿಸ್ತು ಬದ್ಧ ವ್ಯವಸ್ಥೆ, ಸ್ವಯಂ ಸೇವಕರ ಪ್ರಾಮಾಣಿಕ ಸೇವೆ,

ಕಲಾವಿದರಿಗೆ ಅಭಿನಂದನೆ, ಕೊರಗಜ್ಜನ ಧ್ವನಿ ಸುರುಳಿಗಳ ಬಿಡುಗಡೆ ಮೊದಲಾದ ಕಾರ್ಯಕ್ರಮಗಳು ವಾರ್ಷಿಕ ಸಂಭ್ರಮದ ಮೆರುಗನ್ನು ಹೆಚ್ಚಿಸಿ ಜನಾಕರ್ಷಣೆಗೆ ಪಾತ್ರವಾಯಿತು.


ವರದಿ: ಗೋಪಾಲ ಅಂಚನ್